Index   ವಚನ - 107    Search  
 
ಎಲುವಿಲ್ಲದ ನಾಲಗೆ ಹೊದಕುಳಿಗೊಂಡಾಡುವುದು, ಎಲೆ ಕಾಲಂಗೆ ಗುರಿಯಾದ ಕರ್ಮಿ. ಉಲಿಯದಿರು, ಉಲಿಯದಿರು ಭವಭಾರಿ ನೀನು. ಹಲವು ಕಾಲದ ಹುಲುಮನುಜಂಗೆ ಹುಲುಮನುಜ ಹೆಂಡತಿ! ಇವರಿದ್ದರೆ ಅದಕ್ಕದು ಸರಿ. ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ ಲೋಕದೊಳಗೆ ಹೆಂಡಿರುಂಟಾದರೆ ಮಾಡಿಕೊ, ಎನ್ನ ಬಿಡು ಮರುಳೆ.