Index   ವಚನ - 162    Search  
 
ಕಾಯದೊಳಗೆ ಅಕಾಯವಾಯಿತ್ತು. ಜೀವದೊಳಗೆ ನಿರ್ಜೀವವಾಯಿತ್ತು. ಭಾವದೊಳಗೆ ನಿರ್ಭಾವವಾಯಿತ್ತು. ನೆನಹಿನೊಳಗೆ ಮನ ಘನವಾಯಿತ್ತು ಎನ್ನ ತಲೆ ಮೊಲೆಯ ನೋಡಿ ಸಲಹಿದಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಧರ್ಮದವಳಾನು.