Index   ವಚನ - 165    Search  
 
ಕಾಯವಿಕಾರಿಯೆ, ಕಾಯಕ್ಕೆ ಮೆಚ್ಚಿದೆ; ವಾಯದ ಸುಖ ನಿನಗೆ ಮುಂದೆ ನರಕವೆಂದರಿಯೆ. ದೇವರ ದೇವಂಗೆ ವಂದಿಸಹೋದರೆ ಬಾಯಬಿಡದಿರು, ಕೈವಿಡಿದು ಸೆಳೆಯದಿರು. ಚೆನ್ನಮಲ್ಲಿಕಾರ್ಜುನನ ಪಾದಕ್ಕೆರಗುವ ಭರವೆನಗೆ ಮರುಳೆ.