Index   ವಚನ - 185    Search  
 
ಗಂಡ ನೀನು ಹೆಂಡತಿಯಾನು ಮತ್ತೊಬ್ಬರಿಲ್ಲಯ್ಯಾ. ನಿನ್ನ ಬೆಂಬಳಿಯಲಾನು ಮೆಚ್ಚಿಬಂದೆ. ಕಂಡಕಂಡವರೆಲ್ಲ ಬಲುಹಿಂದ ಕೈಹಿಡಿದರೆ, ಗಂಡಾ, ನಿನಗೆ ಸೈರಣೆಯೆಂತಾಯಿತ್ತು ಹೇಳಾ? ಚೆನ್ನಮಲ್ಲಿಕಾರ್ಜುನಯ್ಯಾ, ನಿನ್ನ ತೋಳ ಮೇಲಣವಳನನ್ಯರೆಳದೊಯ್ಯುವರೆ ನೋಡುತಿಹುದುಚಿತವೆ ಕರುಣಿಗಳರಸಾ.?