Index   ವಚನ - 212    Search  
 
ತನು ನಿಮ್ಮ ರೂಪಾದ ಬಳಿಕ ಆರಿಗೆ ಮಾಡುವೆ? ಮನ ನಿಮ್ಮ ರೂಪಾದ ಬಳಿಕ ಆರ ನೆನೆವೆ? ಪ್ರಾಣ ನಿಮ್ಮ ರೂಪಾದ ಬಳಿಕ ಆರನಾರಾಧಿಸುವೆ? ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ಆರನರಿವೆ? ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಿಂದ ನೀವೆಯಾದಿರಾಗಿ ನಿಮ್ಮನೆ ಅರಿವುತ್ತಿರ್ದೆನು.