Index   ವಚನ - 301    Search  
 
ಬೆಟ್ಟಕ್ಕೆ ಸಾರವಿಲ್ಲೆಂಬರು; ತರುಗಳು ಹುಟ್ಟುವ ಪರಿ ಇನ್ನೆಂತಯ್ಯಾ? ಇದ್ದಲಿಗೆ ರಸವಿಲ್ಲೆಂಬರು; ಕಬ್ಬುನ ಕರಗುವ ಪರಿ ಇನ್ನೆಂತಯ್ಯಾ? ಎನಗೆ ಕಾಯವಿಲ್ಲೆಂಬರು; ಚೆನ್ನಮಲ್ಲಿಕಾರ್ಜುನನೊಲಿವ ಪರಿ ಇನ್ನೆಂತಯ್ಯಾ?