Index   ವಚನ - 363    Search  
 
ವಿರಕ್ತಿ ವಿರಕ್ತಿಯೆಂಬವರು ವಿರಕ್ತಿಯ ಪರಿಯೆಂತುಟು ಹೇಳಿರಯ್ಯಾ? ಕಟ್ಟಿದ್ದ ಲಿಂಗವ ಕೈಯಲ್ಲಿ ಹಿಡಿದು ಬತ್ತಲೆಯಿರ್ದಡೆ ವಿರಕ್ತನೆ? ಉಟ್ಟುದ ತೊರದ ಮತ್ತೆ ಕಟ್ಟಿದ ಲಿಂಗವ ಕೈಯಲ್ಲಿ ಹಿಡಿಯಲೇಬೇಕು. ಉಟ್ಟುದ ತೊರೆಯದೆ ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದ ಭ್ರಷ್ಟರನೇನೆಂಬೆ ಚೆನ್ನಮಲ್ಲಿಕಾರ್ಜುನಾ?