ಸಪ್ತಧಾತುಗಳಿಂದ ಬಳಸಲ್ಪಟ್ಟ ಈ ಶರೀರವೆ
ಶಿವನ ಪಟ್ಟಣವೆಂದು ಹೇಳಲ್ಪಟ್ಟಿತ್ತು.
ಈ ಪಿಂಡವೆಂಬ ಪಟ್ಟಣದಲ್ಲಿ
ಸೂಕ್ಷ್ಮ ವಾದಂಥಧಾರಾಕಾಶದಿಂದ ಮನೋಹರವಾಗಿದ್ದ
ಹೃದಯಕಮಲವೆ ಅಂತಃಪುರವು.
ಅಲ್ಲಿ ನಿತ್ಯಪರಿಪೂರ್ಣತ್ವದಿಂದ ಸಿದ್ಧನಾಗಿ
ಸಚ್ಚಿದಾನಂದವೇ ಕುರುಹಾಗುಳ್ಳ ಪರಮಶಿವನು
ಜಲದಲ್ಲಿ ತೋರುತ್ತಿರ್ದ
ಆಕಾಶದೋಪಾದಿಯಲ್ಲಿ ಪ್ರತ್ಯಕ್ಷವಾಗಿ
ಪ್ರಕಾಶವೇ ಸ್ವರೂಪವಾಗುಳ್ಳಾತನಾಗಿ ಇರುತಿರ್ದನು.
ಆ ಜಲಮಧ್ಯದಲ್ಲಿಯ ಆಕಾಶ ಬಿಂಬದಲ್ಲಿರುತಿರ್ದ
ಘಟಾಕಾಶದೋಪಾದಿಯಲ್ಲಿ
[ಅ]ಖಂಡಿತನಾಗಿರ್ದ ಚಿದ್ರೂಪನಾದ
ಶಿವನನು ಭಾವಿಸುವುದಯ್ಯ
ಶ್ರೀ ಚೆನ್ನಮಲ್ಲಿಕಾರ್ಜುನದೇವಾ.
Hindi Translationसप्त धातु से बने यह शरीर
शिव का शहर कहलाया था।
इस पिंड जैसे शहर में
सूक्ष्म जैसे धाराकाश से मनोहर हुआ
हृदयकमल ही अंत:पुर।
वहाँ नित्य परिपूर्णत्व से सिद्ध सच्चिदानंद ही
चिह्न रहे परमशिव जल में दिखाते रहे
आकाश रूप में प्रत्यक्ष होकर
प्रकाश ही स्वरूप हुआ जैसा खुद रहरहा था।
उस जल मध्य में आकाश बिंब में रहता
घटाकाश जैसे रूप में
अखंडित चिद्रूप हुआ शिव की
कल्पना करना अय्या श्री चेन्नमल्लिकार्जुनदेवा |
Translated by: Eswara Sharma M and Govindarao B N
English TranslationTranslated by: Dr. Sarojini Shintri
Tamil TranslationTranslated by: Smt. Kalyani Venkataraman, Chennai