Index   ವಚನ - 412    Search  
 
ಹಸಿವೆ ನೀನು ನಿಲ್ಲು ನಿಲ್ಲು; ತೃಷೆಯೆ ನೀನು ನಿಲ್ಲು ನಿಲ್ಲು; ನಿದ್ರೆಯೆ ನೀನು ನಿಲ್ಲು ನಿಲ್ಲು; ಕಾಮವೇ ನೀನು ನಿಲ್ಲು ನಿಲ್ಲು; ಕ್ರೋಧವೇ ನೀನು ನಿಲ್ಲು ನಿಲ್ಲು; ಮೋಹವೇ ನೀನು ನಿಲ್ಲು ನಿಲ್ಲು; ಲೋಭವೇ ನೀನು ನಿಲ್ಲು ನಿಲ್ಲು; ಮದವೇ ನೀನು ನಿಲ್ಲು ನಿಲ್ಲು; ಮಚ್ಚರವೇ ನೀನು ನಿಲ್ಲು ನಿಲ್ಲು; ಸಚರಾಚರವೇ ನೀನು ನಿಲ್ಲು ನಿಲ್ಲು; ನಾನು ಚೆನ್ನಮಲ್ಲಿಕಾರ್ಜುನದೇವರ ಅವಸರದ ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ.