Index   ವಚನ - 413    Search  
 
ಹಸೆ ಹಂದರವನಿಕ್ಕಿ, ತೊಂಡಿಲ ಬಾಸಿಗವ ಕಟ್ಟಿ, ಮದುವೆಯಾದೆನಲ್ಲಾ ನಾನು, ಮೆಚ್ಚಿ ಮದುವೆಯಾದೆನಲ್ಲಾ ನಾನು. ಗಂಡನೆ, ನಿನಗೋತು ಕೈವಿಡಿದವಳಾನು, ಮತ್ತೊಬ್ಬರು ಕೈವಿಡಿದರೆ ನಿನ್ನಭಿಮಾನವ ಪರರೆಳದೊಯಿದಂತೆ ಕಾಣಾ ಚೆನ್ನಮಲ್ಲಿಕಾರ್ಜುನಾ.