Index   ವಚನ - 418    Search  
 
ಹಿಂದಣ ಹಳ್ಳ, ಮುಂದಣ ತೊರೆ. ಸಲ್ಲುವ ಪರಿಯೆಂತು ಹೇಳಾ! ಹಿಂದಣ ಕೆರೆ, ಮುಂದಣ ಬಲೆ, ಹದುಳವಿನ್ನೆಲ್ಲಿಯದು ಹೇಳಾ! ನೀನಿಕ್ಕಿದ ಮಾಯೆ ಕೊಲುತಿಪ್ಪುದು ಕಾಯಯ್ಯಾ, ಕಾಯಯ್ಯಾ ಚೆನ್ನಮಲ್ಲಿಕಾರ್ಜುನಾ.