Index   ವಚನ - 421    Search  
 
ಹಿತವಿದೆ ಸಕಲಲೋಕದ ಜನಕ್ಕೆ, ಮತವಿದೆ ಶ್ರುತಿಪುರಾಣಾಗಮದ, ಗತಿಯಿದೆ ಭಕುತಿಯ ಬೆಳಗಿನುನ್ನತಿಯಿದೆ. ಶ್ರೀ ವಿಭೂತಿಯ ಧರಿಸಿದಡೆ ಭವವ ಪರಿವುದು; ದುರಿತ ಸಂಕುಳವನೊರಸುವುದು; ಹರನ ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯದಲ್ಲಿರಿಸುವುದು. ನಿರುತವಿದು ನಂಬು ಮನುಜಾ, ಜನನಭೀತಿಯನಟ್ಟುವ ವಿಭೂತಿ. ಮರಣಭಯವನೋಡಿಪ ವಿಭೂತಿಯೆಂದು ಅಗಸ್ತ್ಯ ಕಾಶ್ಯಪ ಜಮದಗ್ನಿಗಳು ಧರಿಸಿದರಂದು ನೋಡಾ. ಶ್ರೀಶೈಲ ಚೆನ್ನಮಲ್ಲಿಕಾರ್ಜುನನ ಒಲಿಸುವ ವಿಭೂತಿ.