Index   ವಚನ - 422    Search  
 
ಹುಟ್ಟದ ಯೋನಿಯಲ್ಲಿ ಹುಟ್ಟಿಸಿ, ಬಾರದ ಭವಂಗಳಲ್ಲಿ ಬರಿಸಿ, ಉಣ್ಣದ ಊಟವನುಣಿಸಿ ವಿಧಿಗೊಳಗಾಗಿಸುವ ಕೇಳಿರಣ್ಣಾ. ತನ್ನವರೆಂದಡೆ ಮನ್ನಿಸುವನೆ? ಹತ್ತರಿದ್ದ ಭೃಂಗಿಯ ಚರ್ಮವ ಕಿತ್ತೀಡಾಡಿಸಿದವನು ಮತ್ತೆ ಕೆಲಂಬರ ಬಲ್ಲನೆ? ಇದನರಿತು ಬಿಡದಿರು ಬಿಡದಿರು. ಚೆನ್ನಮಲ್ಲಿಕಾರ್ಜುನನಿಂತಹ ಸಿತಗನವ್ವಾ.