Index   ವಚನ - 14    Search  
 
ಪುಣ್ಯಪಾಪವೆಂಬೆರಡನು ಕಣ್ಣಲಿ ಕಾಣರು ಕಿವಿಯಲ್ಲಿ ಕೇಳರು ಪಣ್ಣ ಮೆದ್ದು ಬೀಜವನುಗುಳುವರು ಪುಣ್ಯವನೆತ್ತಬಲ್ಲರಯ್ಯ? ಕಣ್ಣೋಳು ಪಾಪ. ಕರ್ಣದೊಳು ಪುಣ್ಯ ಬಣ್ಣಿಸುವರೆ ಬಯಲು, ಬಯಲನೆ ನುಂಗಿ ನಿರ್ವಯಲಾಯಿತ್ತು. ಮಣ್ಣಿನ ಮಾಟದೊಳು ಬಣ್ಣ ಅನಂತ ಸಿಲುಕಿವೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.