ದಾನಧರ್ಮ ಪರೋಪಕಾರವೆಂಬ(ಬುದ?)
ಹೀನಮರುಳರು ಎತ್ತ ಬಲ್ಲರಯ್ಯ?
ದೀನರಾರು ಧನಿಕರಾರು.
ಮನುಷ್ಯಗೇತಕಯ್ಯ ಪರೋಪಕಾರವು?
ಬಾನದ ಕುರುಳೊಳು ಚೇಳು ಹಾಕಿ ಮಡುಗುವರೆ,
ಜ್ಞಾನದ ವಾಕ್ಯವಲ್ಲವು,
ನಾನು ನೀನು ಎಂಬ ಧೇನುಕರ ಮಾತಿಗೆ(ದು?)
ಮೇಘ ಸುರಿವುತಿದೆ, ಬೆಳೆ ಬೆಳೆಯುತಿದೆ ಪರೋಪಕಾರಕೆ
ನಾ ನೀಡಿದೆ ನಾ ಮಾಡಿದೆನೆಂಬ ಜನ್ಮಕೆ ನರಕ ತಪ್ಪದು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.