ತನ್ನ ಧರ್ಮಕ್ಕೆ ನೀಡಿಸುವ ಅನ್ನ ಉದಕ ಅರವಟ್ಟಿಗೆ ಕೆರೆ ಭಾವಿ
[ಉನ್ಮತ್ತ] ಮನದಂತೆ.
ಮಂಗಳ ಘನ ಮಹಾಲಿಂಗವು
ನನ್ನದು ತನ್ನದು ಎಂಬ ಭಿನ್ನ ಭಾವದ
ಭ್ರಾಂತು ಭವಿಗಳು ಅನಿತ್ಯರೆಂಬರು,
ಸೋನ್ನಾರಿಯಲ್ಲಿ ಹುಟ್ಟಿದ ಹೊನ್ನು ಸೊನ್ನಾರಿಯ ಮಗನೆ?
ಉನ್ನತದಲ್ಲಿ ಹುಟ್ಟಿದ ಹೆಣ್ಣು ಉನ್ನತದ ಮಗಳೆ?
ತನ್ಮಯದ್ಲಲಿ ಹುಟ್ಟಿದ ಮಣ್ಣು ತನ್ಮಯದ ಮಗನೆ?
ಸನ್ಮತ ಮೂರರ ಮಾಯವೆ ಅಭ್ರಚ್ಛಾಯವು;
ಗುಹೇಶ್ವರನ ಉಪಾಯವು.
ನನ್ನದು ನಿನ್ನದುಯೆಂಬ ಅನ್ಯಾಯಿಗಳ ಮಾತು
ಕೇಳಬಾರದು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.