Index   ವಚನ - 17    Search  
 
ಧನಧಾನ್ಯ ಆಷ್ಟಮಹದೈಶ್ವರ್ಯದೊಳು ಮನಹೀನರಾಗಿ ಮಾರ್ಗ ತಪ್ಪಿತು. ಬೆನಕನ ಮದುವೆಯಂತೆ ಆಯಿತು, ಇಂದು ನಾಳೆಯೆಂಬ ಸಂದೇಹಮಾತ್ರದಿಂದ ವನಿತೆ ಸುತ ಮಿತ್ರ ಕಳತ್ರದಿಂದ ಅನಾಚಾರ ಹೊಂದಿತ್ತು. ಮುನಿವ ವೈರಿಯ ಕೈಯ ಚಂದ್ರಾಯುಧದ ಮೊನೆಗೆ ಇದಿರು ಆದಂತಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.