ಎಂಟರ ಮದದಿಂದ ಕಂಟಕ ಹೊಂದುವುದಯ್ಯ.
ನಂಟು ಪಕ್ಷದಿಂದ ನಾಯಕನರಕವಹುದು.
ವೆಂಟಿ ಶುದ್ಧವಹುದು ವ್ಯರ್ಥದಿಂದಾಹದು
ಬಂಟತನ ಒಡೆಯತನಕೆ ವೈರವು ಪ್ರಾಣಹತವು.
ಒಂಟೆಯ ಹಾಲು ಕರೆದು ತಳೆಯಲಿ
ಒಡೆದಂತೆಯಾಯಿತು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Eṇṭara madadinda kaṇṭaka honduvudayya.
Naṇṭu pakṣadinda nāyakanarakavahudu.
Veṇṭi śud'dhavahudu vyarthadindāhadu
baṇṭatana oḍeyatanake vairavu prāṇahatavu.
Oṇṭeya hālu karedu taḷeyali
oḍedanteyāyitu kāṇā
ele nam'ma kūḍala cennasaṅgamadēvayya.