Index   ವಚನ - 19    Search  
 
ಕುರುಹು ಹಿಡಿವನೆ ಗುರುಕರಜಾತ? ಅರುಹಿನ ಪಿಂಡಕ್ಕೆ ಮರವೆ ಸೋಂಕುವುದೇನಯ್ಯ? ವರಲಿಂಗದ ಕರುಣದಿಂದ ವ್ಯರ್ಥವೆ ಅರ್ಥವಾಯಿತ್ತು. ಪರಮತೃಪ್ತ ತಾನಾದ ಬಳಿಕ ಪರಿಕ್ಷುಪ್ತಿ ಉಂಟೆ? ವರಕೃಪೆಯುಳ್ಳ ವಸ್ತುವಿನ ವಚನ ವಂತಿಗೆ ಸಲ್ಲವು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.