Index   ವಚನ - 21    Search  
 
ಪೃಥ್ವಿಯ ಪೋಲ್ವಡೆ ಭಕ್ತ, ಅಪ್ಪುವ ಪೋಲ್ವಡೆ ಮಹೇಶ್ವರ, ಅಗ್ನಿಯ ಪೋಲ್ವಡೆ ಪ್ರಸಾದಿ, ವಾಯುವ ಪೋಲ್ವಡೆ ಪ್ರಾಣಲಿಂಗಿ, ಆಕಾಶವ ಪೋಲ್ವಡೆ ಶರಣ, ಅಂತು ಐಕ್ಯ ಐದರೊಳು ಸ್ವಯಕಾರ್ಯವು ಸನ್ನುತ ವಸ್ತುವು. ಸೌಖ್ಯ ಷಡುಸ್ಥಲಬ್ರಹ್ಮ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.