ನಾನು ಭಕ್ತ, ನಾನು ಮಹೇಶ್ವರ
ನಾನು ಪ್ರಸಾದಿ, ನಾನು ಪ್ರಾಣಲಿಂಗಿ
ನಾನು ಶರಣ, ನಾನು ಐಕ್ಯನೆಂಬುದು ಅಜ್ಞಾನವಾಕ್ಯ.
ವಾನರ ವನದೊಳಗಿದ್ದರೇನು ಹನುಮನೆನಬಹದು?
ಶ್ವಾನ ಬೂದಿಯೊಳು ಹೊರಳಿದರೇನು ಭಸ್ಮಾಂಗಿಯಹುದೆ?
ಮಾನವರು ಎಲ್ಲ ಭಕ್ತರಾಪರೆ? ಮರನೆಲ್ಲ ಗಂಧ ಚಂದನವಪ್ಪುದೇ?
ಬಾನದ ಕುರುಳು ಎಲ್ಲ ಸುಟ್ಟರೆ ಭಸಿತವಪ್ಪುದೆ?
ನಾನು ನೀನು ಎಂಬ ಸಂತೆಗೆ ಜ್ಞಾನ ಅಳವಡದು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.