ಒಬ್ಬರೊಬ್ಬರ ಕಂಡು ಗೊಬ್ಬರಕ್ಕೆ ಬಂಡಿಯ ಹೂಡಿದಂತೆ,
ನಿಬ್ಬರವಾಗಿ ಅಚ್ಚು ಮುರಿದಂತೆ ನಿಜಗೇಡು ಅಪ್ಪುದು.
ಇಬ್ಬಂದಿಗ ನಗುವ
ಇಷ್ಟಲಿಂಗವ ಪ್ರಾಣಲಿಂಗವೆಂದ ಕಾರಣದಿಂದ.
ಉಬ್ಬರವಾಯಿತು, ಉಕ್ಕಿದ ಒಲೆ ತುಂಬಿತು,
ಗಬ್ಬಿತನದಿಂದ ಗರತಿ ಜಾರಿಯಾದಂತೆ ಆಯಿತು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Obbarobbara kaṇḍu gobbarakke baṇḍiya hūḍidante,
nibbaravāgi accu muridante nijagēḍu appudu.
Ibbandiga naguva
iṣṭaliṅgava prāṇaliṅgavenda kāraṇadinda.
Ubbaravāyitu, ukkida ole tumbitu,
gabbitanadinda garati jāriyādante āyitu kāṇā
ele nam'ma kūḍala cennasaṅgamadēvayya.