Index   ವಚನ - 24    Search  
 
ಮಿಸುರವ ನುಡಿವರು, ಮುಸುರುವರು ನೊಣದಂತೆ ಆಶಾಬದ್ಧಕೆ ಅಸಗ ಮೋಳಿಗೆ ಹೊತ್ತಂತೆ ಜಡೆ ಮುಕಟಗಳು. ಉಸುರುವುರು ಪ್ರಣಮ ಉಪದೇಶವ, ಅಶನಾರ್ಥಿಗಳು ಬಸವನ ಕಂಡು ಅರಿಯರು. ಕೇಳಿ ಅರಿಯದೆ ಒಡೆಯರಾದರು. ಉಂಡಮನೆಗೆ ಎರಡು ಬಗೆದ ಕಾರಣದಿಂದಲಿ ಕೆಂಡವು ಆರಿ ಬೂದಿಯಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.