ಜಂಗಮಕೆ ಜನನ ಮರಣ ಉಂಟೆ?
ಸಂಗಯ್ಯ, ಸಂಗದೋಷವು
ನಾನು ಎಂದ ಕಾರಣದಿಂದ ನರಕಪ್ರಾಪ್ತಿ
ಭೃಂಗವು ಪುಷ್ಪಕ್ಕೆ ಎರಗುವುದಲ್ಲದೆ ಕೆಸರಿಂಗೆ ಎರಗುವುದೆ?
ಬಂಗಾರ ಮಣ್ಣಿಂದ ಪುಟ್ಟಿತು ಮಣ್ಣಿಂಗೆ ಕೂಡುವುದೆ?
ಹಿಂಗಡಿಸಬಹುದೆ ತ್ರಿವಿಧವ ವಿಷಪಾತಕವ?
ಶೃಂಗಾರಕ್ಕೆ ಕಟ್ಟಿ ಬಿಡುವ ಸಂಬಂಧಿಗೆ
ಕಷ್ಟವೆ ಅಷ್ಟೈಸಿತ್ತು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.