Index   ವಚನ - 26    Search  
 
ಗುರುವು ತನ್ನೊಳು ಅರಿವರೆ ಗುಪ್ತಜ್ಞಾನವಯ್ಯ. ಪುರೋಹಿತನಾಗುವುದು ಅಂಗದ್ವಾರಕ್ಕೆ. ಪುರುಷಾರ್ಥಗಳ ಮರುಳರು ಎತ್ತಬಲ್ಲರು ಮಂತ್ರ ಉಪದೇಶವ? ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಅರುಹಿತರಿಗೆ ಉಂಟಲ್ಲದೆ ಅನಂಗಿಗಳಿಗುಂಟೆ? ಗರಿಯಿಲ್ಲದೆ ಅಂಬ, ಹೆದೆಯಿಲ್ಲದ ಬಿಲ್ಲು ಸ್ವರವಂದಿಗನಿಲ್ಲದೆ ಎಚ್ಚಂತೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.