Index   ವಚನ - 424    Search  
 
ಹುಟ್ಟು ಹೊರೆಯ ಕಟ್ಟಳೆಯ ಕಳೆದನವ್ವಾ. ಹೊನ್ನು ಮಣ್ಣಿನ ಮಾಯೆಯ ಮಾಣಿಸಿದನವ್ವಾ. ಎನ್ನ ತನುವಿನ ಲಜ್ಜೆಯನಿಳುಹಿ, ಎನ್ನ ಮನದ ಕತ್ತಲೆಯ ಕಳೆದ ಚೆನ್ನಮಲ್ಲಿಕಾರ್ಜುನಯ್ಯನೊಳಗಾದವಳ ಏನೆಂದು ನುಡಿಸುವಿರವ್ವಾ?