Index   ವಚನ - 42    Search  
 
ಓದಿದ ಓದುವುದು ತರ್ಕ, ಮೇದಾರನ ಕತ್ತೆಯಂತೆ ಕೆತ್ತುಗ ಪಾಶ, ಈದ ಹುಲಿಯಂತೆ ಇಮ್ಮನ ಇಕ್ಷು ಶಿಶುವಿಂಗೆ, ನಾದದ ಮೊದಲು, ಬಿಂದುವಿನ ನಡು, ಕಳೆಯ ಕಡೆಯನು ವೇದದ ವಿಪ್ರ ಬಲ್ಲನೆ, ಇಚ್ಚಾಶಕ್ತಿಯ? ಆದಿಯಾಧಾರದೊಳು ಆಖಂಡ ಬ್ರಹ್ಮಾಂಡ ಅಡಕವಾಗಿದೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.