Index   ವಚನ - 43    Search  
 
ಸಂದು ಸಂಶಯವ ಅಳಿದಲ್ಲದೆ ಮುಂದುದೋರದು ಭಕ್ತಸ್ಥಲ, ಗಂಧ ಗರಗಸದಿಂದ ಕೊರೆದು ಅರೆದು ಸುಟ್ಟರೆ ಪರಿಮಳ ಮಾಣ್ಪುದೆ? ವೃಂದ ವನದಿ ವೃಕ್ಷ ಫಲವಪ್ಪ ಕಾಲಕ್ಕೆ ಪಾಷಾಣದಲ್ಲಿ ಇಡುವಡೆ ನೊಂದನೆಂದು ನೋವ ತಾಳ್ದು ಮರನು ವರುಷಕ್ಕೆ ಮರಗೊರಡು ಅಪ್ಪುದೆ? ಅಂದೇನು ಇಂದೇನು ಭಕ್ತಂಗೆ ಕುಂದು ನಿಂದೆ ಒಂದೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.