ಶಾಸ್ತ್ರ ವೈರಾಗ್ಯ, ಪ್ರಸೂತಿ ವೈರಾಗ್ಯ, ಶ್ಮಶಾನವೈರಾಗ್ಯ
ಯಾತನಾಶರೀರಕ್ಕೆ ಇವು ವ್ಯಾಪಾರಂಗಳು,
ನೂತನ ಕಲಿಕೆಯ ಮಾತು ನುಡಿವೈರಾಗ್ಯವು,
ಸೂತಕ ಹೋದ ಮೂರುದಿನಕೆ ಸುರತಾನಂದವು,
ತತ್ಕಾಲದ ಶವಕ್ಕೆ ಏ ಪರಿ ದುಃಖಂಗಳು;
ತತ್ಕಾಲಕ್ಕೆ ವೈರಾಗ್ಯವು, ಕ್ಷಣದೊಳು ಯೋಗ್ಯವು!
ನಿತ್ಯಭಕ್ತಿ ವೈರಾಗ್ಯ ನಿಜಸ್ವರೂಪವು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.