Index   ವಚನ - 45    Search  
 
ನಿತ್ಯವೈರಾಗ್ಯದಿಂದ ದೊರೆಕೊಂಬುದು ಭಕ್ತಸ್ಥಲ, ತತ್ವವೈರಾಗ್ಯದಿಂದ ದೊರೆಕೊಂಬುದು ಐಕ್ಯಸ್ಥಲ, ಚಿತ್ತವೃತ್ತಿಯಲಿ ತಿಳಿದು ಕಾಂಬುದು ಚಿತ್ಪ್ರಕಾಶವ. ರತ್ನದ ಪರೀಕ್ಷೆಯ ರಾಜಾಧಿರಾಜ ಬಲ್ಲನಲ್ಲದೆ ರಾಕ್ಷಸರು ಎತ್ತ ಬಲ್ಲರಯ್ಯ? ಕೃತಯುಗದಿಂದ ಅತ್ತತ್ತ ಜ್ಞಾನ ಇತ್ತಿತ್ತ ಅಜ್ಞಾನ ನಿತ್ಯಜ್ಞಾನ ಅವಿರಳ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.