Index   ವಚನ - 81    Search  
 
ನಿರಾಕಾರದೊಳು ನೀರಬೀಜವ ಮಾಡಿ, ಆರಿಸ ಗಟ್ಟಿಗೊಳಿಸಿ ಹರಹಿದೆ ಸಕಲಕ್ಕೆ, ನಾರಂಗ ನರತಂತ್ರಕೆ ಇಟ್ಟುದಲ್ಲ; ಮೀರಿದ ಸ್ವಯಂ ನೀರಿಂದ ಬೆಳೆದ ನೀರು ತುಂಬಿ ಇಳಿದು ಸಾರಾಯವು ಕೊಬ್ಬರಿಗೆ ಬೆಲ್ಲ ಬೆಂದಂತೆ. ನೀರು ಬೆಂದು ನಿರುತದಲ್ಲಿ ಕಡಿಕಬ್ಬು ಒಡಮರಣವಾಗಿ, ಯಾರ ಕೊಡಬೇಕಿತ್ತೋ ಅವರ ಕೂಡಿದಂತೆ. ನಾರಿವಾಳ ಗುರು, ನೀರುಬೆಲ್ಲ ಶಿಷ್ಯ ಸೇರಿದರೆ ಅಂತಪ್ಪುದನು ಸೈರಿಸಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.