Index   ವಚನ - 82    Search  
 
ತೆಂಗು ತಿಳಿದಂತೆ ಅಂತರಂಗವ ತಿಳಿವವರು, ಕಂಗಳು ಮೂರು ಉಳ್ಳವರ; ಬಹಿರಂಗಕೆ ಉಂಬರೆ (ಬಂಬರೆ?)? ಲಿಂಗವು ಒಡಲಾಗಿ, ನಿರುತ ಅಂಗವೆ ಎಡೆಯಾಗಿ, ಬಂಗಾರದೊಳಮುದ್ರೆಯೆ ಕುಂದಣವಾಗಿ, ಗಂಡಾಳು ಕೀಳು ಆದಂತೆ, ತನ್ನ ಅಂತರಂಗವ ತಿಳಿವುದೆ ಕಾರಣ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.