Index   ವಚನ - 83    Search  
 
ನುಡಿದಂತೆ ನಡೆವವರ, ನಡೆದಂತೆ ನುಡಿವವರ ಒಡೆಯ ನಿನ್ನ ಭಕ್ತರ ಎನಗೊಮ್ಮೆ ತೋರಾ. ಅಡಿಗೆ ಮಡಿಯ ಹಾಸುವೆ, ಅವರ ಲೆಂಕರ ಲೆಂಕನಾಗಿ, ಉಡು ಪಡುಗವ ಹಿಡಿವೆ, ಉಗುಳುವ ತಂಬುಲಿಗೆ, ಕೊಡೆವಿಡಿದು ನಡೆವೆ, ಬೆಸನದ ಬೋವನಾಗಿ. ದೃಢವುಳ್ಳ ಶರಣರ ಬಾಗಿಲ ಕಾಯುವೆ ಶ್ವಾನನಾಗಿ. ಎಡಧಾರು ಇಲ್ಲದೆ ಅವರು ಇಟ್ಟಂತೆ ಇಪ್ಪೆ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.