Index   ವಚನ - 84    Search  
 
ಖಂಡ ವಚನವ ನುಡಿದರೇನೋ ಕಂಡುದ ಬಿಡ ಕೊಂಡುದ ಕೊಡ. ಹಂಡಿಗನ ವಗತನದಂತೆ, ಚಂಡಾಲರು ನುಡಿವರು ನಡೆಯರು. ಕಂಡುದನಾಡಿಸಿಕೊಂಬುದು ಕರ್ಮವು, ದಿಂಡೆಯರ ಸಂಗ ಮಾಡಿದರೆ ದಿಕ್ಕುಗೇಡು. ಬಂಡು ಅಪ್ಪುದು ತಪ್ಪದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.