Index   ವಚನ - 85    Search  
 
ಖಂಡಿತವ ನುಡಿವುದು, ಕರ್ಮಧರ್ಮವ ಕಂಡು ನಡೆವುದು. ಮಂಡೆ ಮಾಸಿದರೆ ಮಿಂದಂತೆ, ಮನದ ಮಲಿನ ಬಿಡುವುದು. ಕಂಡರೆ ಕಣ್ಣು ಮುಚ್ಚುವುದು, ಪರಧನ ಪರಸ್ತ್ರೀ ಪರನಿಂದೆಯ, ಉಂಡು ಉಣ್ಣದೆ, ಬಳಸಿ ಬಳಸದೆ, ಬಯ್ದು ಬಯ್ಯದೆ ಕೆಂಡ ತಾರಿ ಆರಿಸಿದರೆ ಆರಿದಂತೆ, ಉರಿದರೆ ಉರಿದಂತೆ, ಬೆಂಡು ಗುಂಡಿಗೆ ಕಟ್ಟಿದಂತಿರಬೇಕು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.