Index   ವಚನ - 87    Search  
 
ನೋಡವರೆ ಎನ್ನಳವೇ? ನೋಟಕ್ಕೆ ಸಿಕ್ಕರು. ಕೂಡುವರೆ ಎನ್ನಳವೆ? ಕೂಟಕ್ಕೆ ಬಾರರು. ಓಡಿಓಡಿ ಗತ ಬಿದ್ದೆ, ಒಬ್ಬರನು ಕಾಣೆ. ಬೇಡ ಬೇಟೆಗೆ ಹೋಗಿ ಬರಗೈಯಲಿ ಬಂದಂತೆ. ನಾಡ ತಿರುಗಲಾರೆ, ನನ್ನಿಂದ ಆಗದು. ನೋಡಿಕೊ ಇನ್ನು, ನನ್ನಿಂದ ಆಗದು, ನಿನ್ನಿಂದ ಆದುದು ಖೋಡಿಯಲ್ಲಿ ಲಕ್ಷಣವನರಸುವರೆ? ಕೂಡಗೊಡು ನಿನ್ನ ಮಹಾತ್ಮೆ. ಆಡಿದೆ ಮಾತಿಗೆ ತಪ್ಪಲಿಲ್ಲ, ಏಕವಾಕ್ಯ ಪ್ರತಿಷ್ಠಾಚಾರ್ಯ! ಕಾಡುವರೆ ನೀನು, ನಿಷ್ಕರುಣೆ ಅಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.