Index   ವಚನ - 88    Search  
 
ತನ್ನ ತಾನರಿವುದೆ ಉತ್ತಮ ಶರೀರಿ. ಇನ್ನು ಹೇಳಿದರೆ ಕೇಳುವುದು ಮಧ್ಯಮ ಶರೀರ. ಮನ್ನಿಸದೆ ಅಗ್ನಿಗೆ (ತಗ್ಗಿಗೆ?) ಬೀಳುವುದೆ ಕನಿಷ್ಠ ಶರೀರಿ. ಹೊನ್ನಿನ ಬಣ್ಣಕ್ಕೆ ಇವು ಮೂರು ಬಣ್ಣ ಹೆಚ್ಚು. ಅನ್ನವು ದಂಡಿಸಿ ಕೊಂಬುದೆ ಅಧಮ ಜಾತಿ. ಮನ್ನಣೆಯಿಂದ ನೀಡಿದ್ದ ಕೊಂಬುದೆ ಮಧ್ಯಮ ಜಾತಿ. ತನ್ನ ತಾನು ಬೇಡದೆ, ನೀಡಿದರೆ ವಿಚಾರಗೊಂಬುದು ಉತ್ತಮ ಜಾತಿ. ಇನ್ನಾರ ಬೇಡದೆ ಕೃಷಿಯ ಮಾಡಿ ಉಂಬುದು ಅಪೂರ್ವ ಜಾತಿ. ಹನ್ನೊಂದು ಪರಿ ಉದ್ಯೋಗ ಉಂಟು, ಕರ್ಮಧರ್ಮ ಪರಿಶೋಧಿಸಬಲ್ಲರೆ. ಅನ್ಯಾಯ ಹತ್ತದ ಮೇಲುಧರ್ಮ, ಕಾಯಕ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.