ಅಳವಡದವರಿಗೆ ಅಳವಡುವುದೇನಯ್ಯ ಭಕ್ತಿ?
ಬಳೆಯ ಬಿಗುವಿನಲಿ ಕೈಗೇರಿಸಲು ಬಾಳುವವೆ?
ಹುಳಿಯ ಮೆದ್ದವನ ಹಲ್ಲಿಗೆ ಹುರಿಗಡಲೆ ನುರಿವುದೆ?
ಅಳಿಮನದ(ದಿ?) ದಾಸಿವೇಶಿಯರಿಗೆ ಅಳುಪುವಂಗೆ
ಆಗಮನವೇಕೆ ನಿಗಮವೇಕೆ?
ತಿಳಿ ನಿನ್ನೊಳು ನೀನರಿತು ಮನವೆ,
ಬಳಲಬೇಕಾದೀತು ಅನಂತಯೋನಿಯಲಿ.
ಬೆಳೆಯನುಣ್ಣಲೊಲ್ಲದಿರೆ ಹೋಗು ನಿನ್ನ ಪೂರ್ವಕ್ಕೆ.
ನಳಿನಳಿಯೆಂಬ ಕೊಂಬೆ ಮುರಿಯುವ ನಿಲ್ಲುವುದೆ?
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Aḷavaḍadavarige aḷavaḍuvudēnayya bhakti?
Baḷeya biguvinali kaigērisalu bāḷuvave?
Huḷiya meddavana hallige hurigaḍale nurivude?
Aḷimanada(di?) Dāsivēśiyarige aḷupuvaṅge
āgamanavēke nigamavēke?
Tiḷi ninnoḷu nīnaritu manave,
baḷalabēkādītu anantayōniyali.
Beḷeyanuṇṇalolladire hōgu ninna pūrvakke.
Naḷinaḷiyemba kombe muriyuva nilluvude?
Ele nam'ma kūḍala cennasaṅgamadēvayya.