Index   ವಚನ - 92    Search  
 
ತನ್ನ ಸತಿಯ ಬಿಟ್ಟು ಅನ್ಯಸತಿಯಳಿಗೆ ಎರಗುವ ಕುನ್ನಿನಾಯಿಗಳ ನೋಡಬಹುದೆ? ಬಿನ್ನಾಣ ಮಾಡಿದ ರೂಪಿನೊಳು ಶಿವನಿಪ್ಪನೆ? ತನ್ನ ಸತಿ ತನ್ನಂಗ, ಪರಸತಿ ಪರರಂಗ ಮುನ್ನ ಪ್ರತಿಗೆ ಪ್ರತಿ ಸತಿ-ಪತಿ ತನ್ನ ಧನ ತನ್ನ ಸತಿ ತನ್ನ ಮಕ್ಕಳು(ಳ?) ಇನ್ನೊಬ್ಬರೊಯ್ವಾಗ ಸುಮ್ಮನಿಪ್ಪನೆ? ತಿನ್ನಬಂದುದ ತಿನ್ನಬೇಕಲ್ಲದೆ, ತಿನ್ನದ ತಿಂಬರೆ? ಮುನ್ನ ಪರದಾರದಿಂದ [ಮಾಡಿದ] ಪಾಪಿ ರಾವಳನು. ಅನ್ಯಾಯದಿಂದ ಕೆಟ್ಟರು ಅನಂತ ಸಮರ್ಥರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.