Index   ವಚನ - 105    Search  
 
ಒಬ್ಬರ ಕಂಡು ಒಬ್ಬರು ಸಾಹಿತ್ಯವಾದರೇನು, ಸನ್ನಿಹಿತರಲ್ಲ. ಮುಬ್ಬುಗಾವಳ ಕವಿದಂತೆ, ಮೋರೆ ಮೋರೆಗೆ ತಾಕು ತಾಕು. ಇಬ್ಬರ ವಿಶ್ವಾಸ (ಉಚ್ಛ್ವಾಸ?) ಇಕ್ಕುರೋಗವಾಯಿತ್ತು. ನಿಬ್ಬಣ ಮನೆಯಲ್ಲಿ ನೀ ಕದ್ದೆ ತಾ ಕದ್ದೆ ಎಂದು ಕೊಂದಾಡಿದಂತೆ; ಕಬ್ಬ ಕಡಿದು ಗಾಣವಾಡಿದಂತೆ, ಕಾವಲಿಯೊಳು ಸುಟ್ಟರೆ ಸಿಹಿ ಬಿಟ್ಟೀತೆ? ಹುಟ್ಟು ಹಾಕುತ್ತಾರೆ, ಒಡೆಯರಿಗೆ ಭಕ್ತರು ಭಕ್ತರಿಗೆದುರಾಗಿ ಒಡೆಯರು. ಕಬ್ಬು ಕಟ್ಟಿಗೆಗೆ ಆ ಗುಣವಿತ್ತು, ಗುರು ಶಿಷ್ಯರಿಗೆ ಇಲ್ಲ ತುಬ್ಬನಿಕ್ಕಿಸಿ ತೆಗೆದು ಕಳಂಕವ, ಇನ್ನು ಒಬ್ಬನೆ ಗುರುಭಕ್ತ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.