ಬಣ್ಣಿಸುವರು ತಮ್ಮ ವಸ್ತುವ,
ಬಣ್ಣನೆಯ ಭಜನೆಯನಿಟ್ಟು.
ಕಣ್ಣು ತಪ್ಪಿದರೆ, ತೂಕ ಮಾಪು ಮೋಸ.
ಮುರಕ ಮರವೆ ಒಂದೊಂದು,
ಪುಣ್ಯವಾವುದು ಪುಸಗೊಂಡಿ ವೇಷಕ್ಕೆ? ಕಾಯಕವೆಲ್ಲಿ?
ಬಣ್ಣ ವೇಷದಂತೆ, ಬಾಯ ಮಾತು ಲಲ್ಲೆ
ವೇಶ್ಯೆಯ ಮೀರಿಸಿದಂತೆ.
ಕಣ್ಣಿಗೆ ಸಿಕ್ಕದ್ಕೇ ಪಾಪ, ಸಿಕ್ಕಿದ್ದೇ ಪುಣ್ಯ;
ಮಣ್ಣಾಯಿತು ಮಿಕ್ಕಣ ಕಾಯಕ
ಮರವೆಯ ಮಾಯ, ಉಣ್ಣದೆ ಉರಿಯಿತ್ತು.
ಈ ಕಾಯಕ ತುರೀಯದ ಆಯವ ಕಾಣದೆ,
ಹಣ್ಣು ಕಾತಂತೆ ಕಾಸರಿಕನ ಫಲ, ವೇಷ ನಿಷ್ಫಲ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.
Art
Manuscript
Music
Courtesy:
Transliteration
Baṇṇisuvaru tam'ma vastuva,
baṇṇaneya bhajaneyaniṭṭu.
Kaṇṇu tappidare, tūka māpu mōsa.
Muraka marave ondondu,
puṇyavāvudu pusagoṇḍi vēṣakke? Kāyakavelli?
Baṇṇa vēṣadante, bāya mātu lalle
vēśyeya mīrisidante.
Kaṇṇige sikkadkē pāpa, sikkiddē puṇya;
maṇṇāyitu mikkaṇa kāyaka
maraveya māya, uṇṇade uriyittu.
Ī kāyaka turīyada āyava kāṇade,
haṇṇu kātante kāsarikana phala, vēṣa niṣphala kāṇā
ele nam'ma kūḍala cennasaṅgamadēvayya.