Index   ವಚನ - 117    Search  
 
ಆದಿಯಲ್ಲಿ ಒಬ್ಬ ಭಕ್ತನಂಗಶೂನ್ಯದಲ್ಲಿ ಆಚಾರ ಹುಟ್ಟಿತು. ಅಂದಿನ ದಿನದಲ್ಲಿ ಸ್ವರ್ಗ ಮರ್ತ್ಯ ಪಾತಳಕ್ಕೆ ಹೆಪ್ಪು ಆಯಿತ್ತು. ಅಂದಿನ ಭಕ್ತ ಆದಿಯಾದ ಅಂತ್ಯವಾದ ಅನಾದಿಯಾದ. ವಾದದಲ್ಲಿ ಗುರುವಾದ, ಆತ್ಮದಲ್ಲಿ ಲಿಂಗವಾದ, ಅನಾದಿ ಜಂಗಮವಾದ; ಭೇದವಿಲ್ಲದೆ ಮೂರು ಸ್ವರೂಪಕ್ಕೆ ಮೂಲವಾದ. ಆದಿಯ ಭಕ್ತ, ಅಂತಸ್ಥ ಲಿಂಗ, ಅನಾದಿ ಜಂಗಮ. ನಾದ ಬಿಂದು ಕಳೆ ಓಂಕಾರ ವಸ್ತುನಿರ್ದೇಶ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.