Index   ವಚನ - 118    Search  
 
ಭಕ್ತನಾದ ಆರಕ್ಕೆ ಮುಕ್ತನಾದ, ಐಕ್ಯನಾದ, ನಿತ್ಯ ಅನಿತ್ಯದಿಂದ ನಿಜಕ್ಕೆ ಆರು ದರುಶನವಾದ, ಭಕ್ತನೆಂಬ ಬಳ್ಳಿಯೊಳು ಬಂದವು ಎಂಬತ್ನಾಲ್ಕು ಲಕ್ಷ ಜೀವರಾಶಿ. ಸತ್ಯವೆ ಹೂವು, ಸಾಹಿತ್ಯವೆ ಕಾಯಿ ಚಿತ್ತವೆ ಅಂಕುರ, ನಿತ್ಯ ಆಯುಷ್ಯ, ಅಲ್ಪ ಆಯುಷ್ಯ ಕುಡಿವರಿದ ಕೊನೆ, ವಸ್ತುವೆ ಬೀಜ, ಝೇಂಕಾರವೆ ಪ್ರಣಮ ವಿಸ್ತೀರ್ಣ ಸ್ವರ್ಗ ಮರ್ತ್ಯ ಪಾತಳ ವಿಶಾಲವೆ ತೋಟ, ಸಪ್ತಸಮುದ್ರ, ಸಾರಾಯ ಹಣ್ಣು, ಕೃತ್ಯವೆಂಬ ಕೊನೆ ಚಂದ್ರಸೂರ್ಯ ಸೂರ್ಯಮಂಡಲ ಪ್ರತ್ಯಕಸಾಕ್ಷಿ. ಭಕ್ತ ಬಳ್ಳಿ, ಬೀಜ ವಸ್ತು, ಕಾಯಿ ಹಣ್ಣಾಗೆ ಬಯಲೆ ಬಯಲ ಹಂದರ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.