ಭಕ್ತನಾಪರೆ ಬಸವಣ್ಣನಂತೆ,
ಜಂಗಮವಾದರೆ ಪ್ರಭುವಿನಂತೆ
ಎಂಬ ನಿಮಿತ್ಯ ತಂತ್ರವೆಂದು ವಿವೇಕ ವಿಚಾರಿಪಡೆ,
ಉತ್ತಮ ಬ್ರಾಹ್ಮಣನಾಗಿ ಬಂದು,
ಮಧ್ಯಮ ಕನಿಷ್ಠ ಜಾತಿಯೆನ್ನದೆ,
ಭಕ್ತಂಗೆ ಜಾತಿಸೂತಕವಳಿದ ಕಾರಣ ಆತನೆ ಭಕ್ತ.
ಕ್ಷಿತಿಗೆ ಪ್ರಭು ಅನಂಗನಾಗಿ ಬರಲು,
ನೂತನಕ್ಕೆ ಹರಿಯದೆ, ನೂರೊಂದು ಪರಿಯಲಿ ಭಜಿಸಲು
ಆತನೆ ಶಿಷ್ಯ ಮಾತನಾಡಿದರೇನಯ್ಯ,
ಹೋಲುವೆ ಭಕ್ತಿಗೆ ಮುಕ್ತಿಯಿಲ್ಲ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.