Index   ವಚನ - 131    Search  
 
ಅನ್ನದೈವದ ಆಚರಣೆ ಸಲ್ಲದು ಎಂಬ ಭಿನ್ನ ಭಾವದ ಭ್ರಾಂತರೆ ಕೇಳಿರಯ್ಯ: ತನು ಎಂಬುದು ತದ್ದು ತುರಿ ಚಿಬ್ಬು ಭಂಗು ಭಗದಳ ತನ್ನ ಶರೀರದಲ್ಲಿ ಪುಟ್ಟಿತ್ತು. ಆ ನೇತ್ರದಿಂದ ಅನ್ನದೈವ ಅಷ್ಟು ತೋರುತಿಹುದು. ತನ್ನಿಂದ ಆದುದು ತನ್ನಿಂದ ಹೋದುದು. ಹೊನ್ನೇ ಕುಲ, ಅನ್ನ ಉದಕವೇ ದೈವ ಇನ್ನು ಇದರಿಂದ ಹೆಚ್ಚು ಇಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.