Index   ವಚನ - 133    Search  
 
ಸಕಲ ಭಕ್ತನ ಆದಿ ಆಧಾರದಲ್ಲಿ ಅಷ್ಟಕೋಟಿ ತೀರ್ಥಗಳು ಇದ್ದವು. ಆ ಭಕ್ತನ ಹೃದಯಕಮಲ ನಾಭಿಯಲ್ಲಿ ಅಜಾಂಡ ಬ್ರಹ್ಮಾಂಡ ಅಡಕವಾಗಿದ್ದವು. ಭಕ್ತನೆ ಅನಾಚಾರಿ ಆ ಭಕ್ತನೆ ಶಿವಾಚಾರಿ. ಭಕ್ತನಿಂದ ಜೀವನಮುಕ್ತರಾದರು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.