Index   ವಚನ - 146    Search  
 
ಈಸುವ ಸಂಸಾರ ಈಸದಿರೆ ನಿವಾಸ ನಿವಾಸವಪ್ಪುದೇನಯ್ಯ? ದೋಷದ್ರೋಹವೆಂಬ ತೆರೆ ತಾಗಿ ಅರುಹಿಂಗೆ ಉಬ್ಬದಿರೆ, ವಿಷಯವೆಂಬ ಸೋರೆಯ ಕಟ್ಟಿ ಒರೆಯಂ ನೆಡುವುದು. ಮೋಸ ಮುರುಕದ ಮಳೆಗೆ ಆಸೆ ಬೀಳದೆ ತಪ್ಪದು (ಇಪ್ಪುದು?) ಆಸೆ ಆಸೆಗೆ ಹಸ್ತವ ಬೀಸವನಲ್ಲದೆ, ಸಾಹಸ ಧೈರ್ಯಗುಂದದೆ ಈಸಬಲ್ಲರೆ ಶರಣನು. ಏಸು ಲಿಂಗದ ಕೃಪೆ ಅದು ಜಗದೀಶ ತಾನೆ ತಪ್ಪದು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.