Index   ವಚನ - 152    Search  
 
ನಾಲ್ಕು ಆಚಾರ್ಯರಿಗೆ ಲಿಂಗ ವಿಭೂತಿ ರುದ್ರಾಕ್ಷಿ ಇದ್ದ ಕಾರಣ ಅವರ ನಾನು ಭಕ್ತರೆಂಬೆ, ಅವರ ನಾನು ಮುಕ್ತರೆಂಬೆ ಗುರುವೆಂಬ ಕಳಸಕ್ಕೆ ಬಸವೇಶ್ವರಗೆ ಸೋಹಿ ದಾಸೋಹಿ ಅದಕಾರಣ ಅವರ ನಾನು ಭಕ್ತರೆಂಬ ಕಾಣಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.