ರೇವಣಸಿದ್ಧೇಶ್ವರ ಮರುಳಸಿದ್ಧೇಶ್ವರ ಏಕೋರಾಮೇಶ್ವರ
ಪಂಡಿತಾರಾಧ್ಯರೇ
ನಿಮ್ಮ ಚಿನ್ನದ ಲಿಂಗ, ಬೆಳ್ಳಿಯಲಿಂಗ,
ತಾಮ್ರದಲಿಂಗ[ಶಿಲೆಯಲಿಂಗ?] ಏನಾದುವೋ?
ವೆಚ್ಚಕ್ಕಿಲ್ಲದಿದ್ದರೆ ಮಾರಿಕೊಂಡಿರೊ? ಒತ್ತೆ ಹಾಕಿಕೊಂಡಿರೊ?
ಕರಗಿಸಿ ವಸ್ತುವು ಮಾಡಿಸಿಕೊಂಡಿರೊ?
ನಿಮ್ಮ ಲಿಂಗ ಏನಾದುವೂ?
ನಿಮ್ಮ ಸ್ಥಲದ ಲಿಂಗವ ಕಳೆದು
ಪರಸ್ಥಲದ ಇಷ್ಟಲಿಂಗವ ಕಟ್ಟುವರೆ?
ನಿಮ್ಮ ಸ್ಥಲ ಅಂತಸ್ಥಲವಾಯಿತು
ಅಕಟಕಟಾ ಇದು ಏನಯ್ಯ! ಇದು ಎಂತಯ್ಯ!;
ಒಬ್ಬರ ಕೈದು ಒಬ್ಬರದಾಯಿತು. ಎಲೆ ಪಂಡಿತಾರಾಧ್ಯರೆ,
ನಿಮ್ಮ ಇಷ್ಟಲಿಂಗ ಮೂವರಿಗೆ ಸಾಹಿತ್ಯವಾದಬಳಿಕ
ನಿಮಗೂ ಸಲ್ಲದು, ಮೂವರಿಗೂ ಸಲ್ಲದು,
ಯಾರಿಗೂ ಸಲ್ಲದು ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.