Index   ವಚನ - 157    Search  
 
ಜಂಗಮಲಿಂಗ ಜಂಗಮಲಿಂಗ ಎಂಬ ಅಣ್ಣಗಳಿರಾ. ಜಂಗಮ ತಾನಾದರೆ ಇಷ್ಟಲಿಂಗವ ಧರಿಸಲ್ಯಾತಕ್ಕೊ? ಜಂಗಮ ತಾನಾದರೆ ಅಂಗಸುಖವ ಬಯಸಲ್ಯಾತಕ್ಕೊ? ಆ ಜಂಗಮ ಅನಂಗವೇಷ ಅನಂಗರೂಪ ಜಂಗಮಕ್ಕೆ ಸ್ಥಾವರವಿಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.